ಒಳ ಮೀಸಲಾತಿ ಇಲ್ಲದೆ 56432 ಸರ್ಕಾರಿ ಉದ್ಯೋಗ ನೇಮಕ ಮಾಡಿ ಅಲೋ ಆದೇಶ ಹೊರಡಿಸಿರುವ ಸರ್ಕಾರದ ಕ್ರಮವನ್ನು ಮಾದಿಗ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯದರು ಬೃಹತ್ ಪ್ರತಿಭಟನೆ ನಡೆಸಿದೆ.

ಪರಿಶಿಷ್ಟ ಜಾತಿಗಳ ಮೀಸಲಾತಿ 101 ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ ಹಾಗಾಗಿ ಮೀಸಲಾತಿ ವರ್ಗೀಕರಿಸಬೇಕು ಎಂದು ಕಳೆದ 35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ವನ್ನು ಒಕ್ಕೂಟ ನಡೆಸಿಕೊಂಡು ಬಂದಿದೆ ಇದರ ಪ್ರತಿ ಫಲವಾಗಿ 2024 ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ಪರಿಶಿಷ್ಟ ಮೀಸಲಾತಿ ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿತು. ತೀರ್ಪಿನ ಬೆನ್ನೆಲ್ಲೇ ಸರ್ಕಾರವು ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎಂದು ಐತಿಹಾಸಿಕ ತೀರ್ಪು ಸಹ ಹೊರಬಿದಿತ್ತು ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮಹಂದ ಆಯೋಗ ರಚಿಸಿ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದಿಸಿತು ಆನಂತರ ವಿಧಾನಸಭೆ ವಿಧಾನ ಪರಿಷತ್ ನಲ್ಲಿ ಮಸೂದೆ ಅಂಗೀಕರಿಸಿ ರಾಜ್ಯಪಾಲರ ಸಹಿ ನಂತರ ವಿವೇಕ ಅಧಿಕೃತಗೊಂಡಿತು ಇವೆಲ್ಲವನ್ನು ಸರ್ಕಾರ ಬದಲಿಗೊತ್ತಿ ಒಳ ಮೀಸಲಾತಿ ಅಳವಡಿಸದೆ ಹಳೆ ರೋಸ್ಟರ್ ವಿಧಾನದಂತೆ 56432 ಉದ್ಯೋಗ ನೇಮಕ ಮಾಡಲು ಫೆಬ್ರವರಿ 22ರಂದು ಸುತ್ತೋಲೆ ಹೊರಡಿಸಿದೆ ಈ ಸುತ್ತೋಲೆ ಕಾನೂನುಬಾಹಿರವಾಗಿದೆ ಅವಜ್ಞಾನಿಕವಾಗಿದೆ ಹಾಗೂ ಸಂವಿಧಾನ ವಿರೋಧಿ ಯಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಒಳ ಮೀಸಲಾತಿ ಇಲ್ಲದೆ 56432 ಉದ್ಯೋಗ ನೇಮಕಾತಿಗೆ ಹೊರಡಿಸಿರುವ ದಿನಾಂಕ 27.02.2026ರ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಒಳ ಮೀಸಲಾತಿ ಅಳವಡಿಸಿ ಶೇಕಡ 15ರಷ್ಟು ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಮಾಡಬೇಕು ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನವನ್ನು ಕೈಬಿಡಬೇಕು ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳಿಗೆ ಶೇಕಡ ಒಂದರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಪರಿಶಿಷ್ಟ ಜಾತಿಗೆ ಶೇಕಡ 17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇಕಡಾ ಏಳು ಒಟ್ಟು ಶೇಕಡ 56 ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು